Neene Karana | ನಿನ್ನ ಸೇವಿಸಲು ನೂರೆಂಟು ಕಾರಣ - Prakash | Kannada Christian Songs Lyrics

Singer | Prakash |
ನಿನ್ನ ಸೇವಿಸಲು ನೂರೆಂಟು ಕಾರಣ
ಹಿಂಬಾಲಿಸಲು (ನಿನ್ನ) ಸಾವಿರಾರು
ಕಾರಣ-2
ನಿನ್ನ ಉಪಕಾರಕ್ಕೆ ಕೊನೆಯೇ ಇಲ್ಲ
ನನ್ನ ಮೇಲಿಟ್ಟಿರುವ ಪ್ರೀತಿಗೆ ಅಂತ್ಯವೇ
ಇಲ್ಲ-2
ನನ್ನೆಲ್ಲಾ ಆಶೀರ್ವಾದಕ್ಕೆ ಯೇಸುವೇ ನೀನೇ
ಕಾರಣ
ನನ್ನೆಲ್ಲಾ ಅಭಿವೃದ್ಧಿಗೆ ಯೇಸುವೇ ನೀನೇ
ಕಾರಣ-2
ಆರಾಧನೆ…. ಆರಾಧನೆ….
1. ನನ್ನಿಂದ ಏನನ್ನೂ ಬಯಸದಷ್ಟು
ಲೋಕವು ಇಲ್ಲವೇ ಇಲ್ಲ
ನನ್ನಿಂದ ಏನನ್ನೂ ಬಯಸದೆ
ಎಲ್ಲವ ನನಗೆ ಮಾಡಿರುವೆ -2
ಈ ಲೋಕವ ನಂಬದೆ ನಿನ್ನನ್ನೇ ನಂಬುವೆ
ನೀನೇ ನಂಬಿಗಸ್ತನು -2
2. ನೀ ಕೊಟ್ಟ ಸೇವೆಗಾಗಿ ಹೆಮ್ಮಪಡದೆ
ನನ್ನನ್ನೇ ತಗ್ಗಿಸಿಕೊಳ್ಳುವೆ
ನೀ ಕೊಟ್ಟ ಈ ಪದವಿಗೆ ಗರ್ವಪಡದೆ
ಸೇವಕನಾಗಿಯೆ ಇರುವೆ -2
ನನ್ನ ಹೆಸರೂ ಸ್ಥಳವೂ ನಿನ್ನಲ್ಲಿರುವುದಕ್ಕೆ
ದೇವಾ ನಾನೇ ಧನ್ಯನು-2
ಆರಾಧನೆ…. ಆರಾಧನೆ….