MAI MARESIDA PREMA | ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ - MRUTHYUNJAYA | Kannada Christian Songs Lyrics
Singer | MRUTHYUNJAYA |
[ಪಲ್ಲವಿ ]
ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
ಇಹದ ಬಾಂದವ್ಯದಿಂದ ನನ್ನ ಬಿಡಿಸಿ||2||
ನನ್ನನ್ನೇ ಮೈ ಮರೆಸಿ ನಿನ್ನ ಪ್ರೀತಿಯಲ್ಲಿ ತೆಲಾಡಿಸಿ ||2 ||
ಪ್ರತಿದಿನವೂ ನನ್ನ ಜೊತೆ ಇರುವೆನೆಂದ ಪ್ರಾಣೇಶ್ವರ
ಹೆತ್ತ ತಾಯಿ ಮರೆತರು ಮರೆಯನೆಂದ ಸರ್ವೇಶ್ವರ ||2 ||
ಚರಣ(1)
ಈ ಬಣ್ಣದ ಲೋಕದಲ್ಲಿ ನಿನ್ನ ಕೃಪೆ ನೆನೆದಾಗ
ಎಲ್ಲವೂ ಬರಿದಾಯಿತು
ಪ್ರತಿ ಹೆಜ್ಜೆ ಹೆಜ್ಜೆಗೂ ನಿನ್ನ ಕೃಪೆ ನನಗೆ
ಹೊಸ ಜೀವ ಪ್ರಸಾದಿಸಿತು||2 ||
ನಾನೇನಾಗಿರುವೆ ಅದು ನಿನ್ನ ಕೃಪೆಯೇ
ಮುಂದೆ ಏನಾಗುವನೋ ಅದು ನಿನ್ನ ಕೃಪೆಯೆ||2 ||
ನಿನ್ನ ಕೃಪೆ ನನಗೆ ಆಧಾರವಾಯಿತು
ಜಾರಿ ಬೀಳದಂತೆ ಜೊತೆ ನಿಂತಿತು||2 ||
ಚರಣ (2)
ಈ ಆತ್ಮೀಯ ಯಾತ್ರೆಯಲ್ಲಿ ನಿನ್ನ ಪ್ರೀತಿ ನೆನೆದಾಗ
ಅರಣ್ಯಕ್ಕೂ ಆನಂದವೇ
ಎಲ್ಲವನ್ನೂ ಕಳೆದುಕೊಂಡ ಈ ನೊಂದ ಬಾಳಿಗೆ
ನೂತನ ಆರಂಭವೆ||2 ||
ಈ ಆತ್ಮಲಾಪನೆ ನಿನ್ನ ಕೃಪೆಯೆ
ಈ ಆತ್ಮನಂದವು ನಿನ್ನ ಕೃಪೆಯೆ||2 ||
ನಿನ್ನ ಕೃಪೆ ನನಗೆ ಸಾಕೇನಿಸಿತು
ಇಹದಲ್ಲಿ ಬೇರೇನೂ ಬೇಡೆನಿಸಿತು||2||
ಚರಣ (3)
ಈ ಕಣ್ಣಂಚಿನಲ್ಲೂ ಹೃದಯಂತರಾಳಾದಲು
ಎಲ್ಲೆಲ್ಲೂ ನಿನ್ನದೇ ಧ್ಯಾನ
ಮುರಿದ ಮನಸ್ಸಿನಿಂದ ನಿನ್ನನ್ನೇ ಸ್ತುತಿಸುವುದೇ
ಆಗೋಯ್ತು ನನ್ನ ಪ್ರಾಣ||2 ||
ಈ ಸಂಧ್ಯಾರಾಗವು ನಿನ್ನ ಕೃಪೆಯೆ
ಸಾಹಿತ್ಯಸ್ತುತಿಯು ನಿನ್ನ ಕೃಪೆಯೆ||2||
ನಿನ್ನ ಕೃಪೆ ನನಗೆ ಆನಂದವಾಯಿತು
ಸೋತುಹೋಗದಂತೆ ಸ್ಥಿರಪಡಿಸಿತು||2 ||