Type Here to Get Search Results !

Aradhisuve ninna || ಆರಾಧಿಸುವೆ ನಿನ್ನ || Kannada worship song Lyrics

ಕರಗಳನೆತ್ತಿ ಪೂರ್ಣ ಹೃದಯದಿಂದ ನಿತ್ಯವೂ ಆರಾಧಿಸುವೆ - Ruby - Kannada worship song Lyrics

Singer Ruby

ಕರಗಳನೆತ್ತಿ ಪೂರ್ಣ ಹೃದಯದಿಂದ ನಿತ್ಯವೂ ಆರಾಧಿಸುವೆ
ಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ ಎಂದೆಂದಿಗೂ ಆರಾಧಿಸುವೇ/2/
ಆರಾಧಿಸುವೆ ನಿನ್ನ ಆರಾಧಿಸುವೆ ನಿನ್ನ
ಆರಾಧಿಸುವೆ ನಿನ್ನ ಯೇಸುವೆ,
ಸ್ತುತಿಗೆ ಯೋಗ್ಯನು ನೀನೇ ಮಹಿಮೆಗೆ ಪಾತ್ರನು ನೀನೇ
ನನ್ನಯ ಕರ್ತನೆ ಯೇಸುವೇ. //ಕರಗಳ//

1. ಪಾಪವಿಲ್ಲದ ನೀನು ಪಾಪದಿಂದ ನನ್ನ ಬಿಡಿಸಲು
ದಂಡನೆಯ ಹೊತ್ತುಕೊಂಡೇ, ಮಗನಾಗಿ ಮಾಡಿಕೊಂಡೆ.//2//
ನಿನ್ ಪ್ರತಿ ರಕ್ತಕಣದಲ್ಲೂ ನನ್ ರೂಪ ಇರಿಸಿರುವೆ
ನಿನ್ ಜೀವದಲ್ಲೇ ನನ್ನ ಹುದುಗಿಸಿದೆ .//2//

2. ಕಣ್ಣೀರ ಸಮಯದಲ್ಲಿ ಕಣ್ಣೀರ‍ ಓರೆಸಿರುವೆ
ಯಾರೂ ಇಲ್ಲ ಅನ್ನಿಸುವಾಗ ಕದಲದೇ ಜೊತೆಗಿರುವೆ.//2//
ಸೋತುಹೋದ ಸಮಯವೆಲ್ಲ ನನ್ನನ್ನು ಬಲಪಡಿಸಿ ಕರಹಿಡಿದು ಕಣ್ಮಣಿಯಂತೆ ಕಾದಿರುವೆ.//2//

3. ಬರಿದಾದ ಈ ಬಾಳನ್ನು ಕೃಪೆಗಳಿಂದ ಶೃಂಗರಿಸಿರುವೆ
ನಕ್ಕವರ ಮುಂದೆಯೇ ಘನವಾಗಿ ಇಟ್ಟಿರುವೆ//2//
ಮಣ್ಣಾದ ನನ್ನನ್ನು ಬಂಗಾರ ಮಾಡಿರುವೆ
ನಿನ್ನಂತೆ ಪ್ರೀತಿಸಲು ಯಾರೂ ಇಲ್ಲ.//2//



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad

Ads Area